ಸಂಹಾರ ( ಆಂಗ್ಲ: ) ೨೦೧೮ ರ ಕನ್ನಡ ಭಾಷೆಯ ಚಿತ್ರ. ಈ ಚಿತ್ರ ಗುರು ದೇಶಪಾಂಡೆ ಅವರು ನಿರ್ದೇಶಿಸಿರುವ ಥ್ರಿಲ್ಲರ್ ಚಿತ್ರ.ಚಿರಂಜೀವಿ ಸರ್ಜಾ, ಹರಿಪ್ರಿಯಾ, ಕಾವ್ಯ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ..ರವಿ ಬಸ್ರೂರು ಅವರು ಚಿತ್ರಕ್ಕೆ ಸಂಗೀತ ಮತ್ತು ಹಿನ್ನಲೆ ಸಂಗೀತ ನೀಡಿದ್ದಾರೆ. ಜಗದೀಶ್ ವಾಲಿ ಅವರು ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ಈ ಚಿತ್ರವು ತಮಿಳಿನ ರೋಹಿನ್ ವೆಂಕಟೇಶನ್ ನಿರ್ದೇಶನದ ಅದೇ ಕಣ್ಗಳ್ ಚಿತ್ರದ ರೀಮೇಕ್. ಈ ಚಿತ್ರವು ಪ್ರತೀಕಾರದ ಕಥೆಯನ್ನು ಹೊಂದಿದೆ, ಚಿರಂಜೀವಿ ಸರ್ಜಾ ಹುಟ್ಟು ಕುರುಡನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಮಂಗಳೂರು ಮತ್ತು ಸುತ್ತಲಿನ ಕರಾವಳಿ ಪ್ರದೇಶದಲ್ಲಿ ಚಿತ್ರೀಕರಿಸಲಾಯಿತು. == ಪಾತ್ರವರ್ಗ == ಶ್ರೀಶೈಲ ಆಗಿ ಚಿರಂಜೀವಿ ಸರ್ಜಾ ನಂದಿನಿ ಆಗಿ ಹರಿಪ್ರೀಯಾ ಜಾನಕಿ ಆಗಿ ಕಾವ್ಯ ಶೆಟ್ಟಿ ರಾಜಹುಲಿ ಆಗಿ ಚಿಕ್ಕಣ್ಣ == ಉಲ್ಲೇಖಗಳು ==